ಪೀಠಿಕೆ

ದ.ಕ ಜಿಲ್ಲೆಯ ಮಲೆನಾಡ ಪ್ರಾಂತ್ಯವಾದ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಒಂದು ಗ್ರಾಮೀಣ ಪ್ರದೇಶ. ಸುತ್ತಲೂ ಹಸಿರು ಸಸ್ಯ ಸಮೃದ್ಧಿಯುಳ್ಳ ಈ ಗ್ರಾಮೀಣ ಪರಿಸರದ ವಿದ್ಯಾಥಿ೯ಗಳ ಪದವಿಶಿಕ್ಷಣದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ 1982 ರಂದು ಸೇಕ್ರೆಡ್ ಹಾಟ್೯ ಮಹಾವಿದ್ಯಾಲಯ ಸ್ಥಾಪನೆಗೊಂಡಿತು. ಮಂಗಳೂರು ಕ್ಯಾಥೋಲಿಕ್ ಬೋಡ್೯ ಆಫ್ ಎಜ್ಯುಕೇಶನಿನ ಆಡಳಿತಕ್ಕೊಳಪಟ್ಟ ಈ ಮಹಾವಿದ್ಯಾಲಯವು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿದೆ. ಬಿ.ಎ./ಬಿ.ಕಾಂ/ ಬಿ.ಸಿ.ಎ/ ಪದವಿ ಕೋಸು೯ಗಳು ಹಾಗೂ ಎಂ.ಕಾಂ ಸ್ನಾತಕೋತ್ತರ ಪದವಿ ಕೋಸಿ೯ಗೆ ಇಲ್ಲಿ ಅವಕಾಶವಿದೆ. ಗ್ರಾಮೀಣ ಪರಿಸರದಲ್ಲಿರುವ ಈ ಕಾಲೇಜು ಗುಣಮತಟ್ಟದ ಶಿಕ್ಷಣವನ್ನು ನೀಡುತ್ತಾ, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ಮಾತ್ರವಲ್ಲದೆ ಎನ್.ಎಸ್.ಎಸ್., ಎನ್.ಸಿ.ಸಿ. ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನೇಕ ಸ್ಥಾನಗಳನ್ನು ಗಿಟ್ಟಿಸಿಕೊಂಡು ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಿದೆ.

ದೃಷ್ಟಿಕೋನ

ಪ್ರಶಾಂತವಾದ ಗ್ರಾಮೀಣ ಪರಿಸರದಲ್ಲಿ ಸ್ಥಾಪನೆಗೊಂಡ ಸೇಕ್ರೆಡ್ ಹಾಟ್೯ ಕಾಲೇಜು ಸೃಜನಾತ್ಮಕ ಹಾಗು ಕಾರ್ಯದ್ಯಕ್ಷತೆಯೊಂದಿಗೆ ಸಮಾಜದ ಬಡ ಹಾಗೂ ಕೆಳವಗ೯ದ ಜನರ ಅಭಿವೃದ್ಧಿಗಾಗಿ ಭಾರತದ ಸಂವಿಧಾನಾತ್ಮಕ ತತ್ವಗಳನ್ನು ಗೌರವಿಸಿಕೊಂಡು ಏಸುಕ್ರಿಸ್ತರ ದಿವ್ಯ ಸಂದೇಶಗಳನ್ನು ಎತ್ತಿ ಹಿಡಿಯುತ್ತಾ, ಪ್ರೀತಿ ಹಾಗು ಸಮಪ೯ಣಾ ಭಾವದ ಸೇವೆಯಾಗಿ ಸಮಾಜಕ್ಕೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುವ ದೃಷ್ಟಿಕೋನವನ್ನು ಹೊಂದಿದೆ.

ಮೌಲ್ಯಗಳ ಸತ್ತ್ವ

ಉತ್ಕೃಷ್ಟ ಸಾಧನೆ
ಸಮಪ೯ಣಾ ಭಾವದ ಸೇವೆ
ದೇವರ ಮೇಲೆ ನಂಬಿಕೆ
ಪರಸ್ಪರ ಪ್ರೀತಿ ವಿಶ್ವಾಸ
ಸಾಂಸ್ಕೃತಿಕ - ನೈತಿಕ ಕಾಯ೯ವಿಧಾನ

ಧ್ಯೇಯೋದ್ದೇಶ

ಕಾಯ೯ದ್ಯಕ್ಷತೆ ಹಾಗು ಸೃಜನಾತ್ಮಕ ಚಟುವಟಿಕೆಗಳ ಮೂಲಕ ಸಮಾಜದ ಎಲ್ಲಾ ವಿದ್ಯಾಥಿ೯ಗಳ ಸಮಗ್ರ ಬೆಳವಣಿಗೆಯನ್ನುಂಟು ಮಾಡುವುದಲ್ಲದೆ ಯುವ ಪೀಳಿಗೆಯನ್ನು ಉತ್ತಮ ಸಂಸ್ಕಾರವಂತರನ್ನಾಗಿಸುವ, ಪರಸ್ಪರ ಪ್ರೀತಿ ಸೌಹಾರ್ದತೆಯೊಂದಿಗೆ ಸಮಾಜ ಸೇವಾ ಮನೋಭಾವದಿಂದ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಭವ್ಯ ಭಾರತ ದೇಶದ ನಿಮಾ೯ಣಕ್ಕಾಗಿ ಅವರಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುವುದು ಸೇಕ್ರೆಡ್ ಹಾಟ್೯ ಮಹಾವಿದ್ಯಾಲಯದ ಧ್ಯೇಯೋದ್ದೇಶವಾಗಿದೆ.

ಲಾಂಛನ ಮತ್ತು ಧ್ಯೇಯವಾಕ್ಯ

ಪಶ್ಚಿಮಘಟ್ಟದ ಕುದುರೆಮುಖ ಪವ೯ತ ಶ್ರೇಣಿಗಳ ತಪ್ಪಲು ಪ್ರದೇಶದ ಕಲಾತ್ಮಕ ಹಿನ್ನೆಲೆಯೊಂದಿಗೆ ತೆರೆದ ಪುಸ್ತಕ ಮತ್ತು ಪ್ರಕಾಶಿಸುವ ಜ್ಯೋತಿ. ಇದನ್ನಾವರಿಸಿಕೊಂಡಂತೆ ಪವಿತ್ರ ಹೃದಯದ ಸಂಕೇತ, ಇದು ವಿದ್ಯಾಸಂಸ್ಥೆಯ ಲಾಂಛನ. ವಿಧ್ಯಾಥಿ೯ಗಳು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆ ಸಾಗುವ ಪರಿಯನ್ನು ಇದು ಸೂಚಿಸುತ್ತದೆ. ಹಾಗೆಯೇ ಹೃದಯದ ಚಿತ್ರವು ಮಾನವ ಕುಲಕ್ಕೆ ಏಸುಕ್ರಿಸ್ತರು ನೀಡಿದ ಸಂದೇಶ "ಪ್ರೀತಿ ಹಾಗೂ ಸೇವೆ" ಯನ್ನು ಧ್ವನಿಸುತ್ತದೆ. ಸೇಕ್ರೆಡ್ ಹಾಟ್೯ ಮಹಾವಿದ್ಯಾಲಯದ ಧ್ಯೇಯ ವಾಕ್ಯವೇ "ಪರಸ್ಪರ ಪ್ರೀತಿ ಮತ್ತು ಸೇವೆ"